Learn free online English grammar through Kannada: General English grammar
Tips to learn English speaking by Kannada | Easy steps to learn English spoken by Kannada
ನಿಮಗಿದು ಗೊತ್ತೇ? ಮಕ್ಕಳು, ಶಾಲೆಗೆ ತೆರಳುವ ಮುನ್ನವೇ ತಮ್ಮ ತಾಯಿ ಭಾಷೆಯನ್ನು ಯಾವುದೇ ಹಿಂಜರಿಕೆಇಲ್ಲದೆ ಮಾತನಾಡುತ್ತಾರೆ. ಓದು ಬರಹ ಬಾರದ ಮನುಷ್ಯ ತನ್ನ ಭಾಷೆಯಲ್ಲಿ ಮಾತನಾಡಿ ಅರ್ಥ ಮಾಡಿಕೊಳ್ಳುತ್ತಾನೆ. ಇವರಿಬ್ಬರಿಗೂ ಭಾಷೆಯ ಅಕ್ಷರಗಳು ಹಾಗು ವ್ಯಾಕರಣಗಳು ತಿಳಿದಿಲ್ಲದಿದ್ದರೂ, ಬರೆದು ಓದಲು ಬರದಿದ್ದರೂ ತಮ್ಮ ಭಾಷೆಯನ್ನು ಮಾತನಾಡಿ ಅರ್ಥ ಮಾಡಿಕೊಳ್ಳುತ್ತಾರೆ. ಇದರ ಅರ್ಥವೇನೆಂದರೆ, ಒಂದು ಭಾಷೆಯನ್ನು ಕಲಿತು ಮಾತನಾಡಲು, ಪದಗಳ ಪರಿಚಯ,ಶಬ್ಧಗಳ ಜ್ಞಾನ, ಮಾತನಾಡುವ ರೀತಿ, ಧಾಟಿ ಹಾಗು ಮಾತಾಡುವ ಸತತ ಅಭ್ಯಾಸ ಮಾಡುವ ಅವಶ್ಯಕತೆ ಇದೆ. ಕನ್ನಡವನ್ನು ಆರಾಮಾಗಿ ಮಾತನಾಡುವುದಾದರೆ ಇಂಗ್ಲಿಷ್ ಏಕೆ ಮಾತನಾಡಲಾಗದು? ಇಂಗ್ಲಿಷ್ ಒಂದು ಭಾಷೆ, ಗಣಿತ ಹಾಗು ವಿಜ್ಞಾನದ ತರಹ ಕಬ್ಬಿಣದ ಕಡಲೆಯಲ್ಲ. ಒಂದು ೪ ನೆಯ ತರಗತಿಯ ಮಗುವು, ತನಗಿಂತ ಹೆಚ್ಚು ತಿಳಿದಿರುವ ಮನುಷ್ಯನನ್ನು ಇಂಗ್ಲಿಷ್ ಮಾತನಾಡಲು ಬರಲಾರದೆಂದು ತೀರ್ಮಾನಿಸಬಹುದು. ಯಾವುದೇ ಕೆಲಸ ಮಾಡಲು ಹಾಗು ಯಾವುದೇ ಭಾಷೆ ಕಲಿಯಲು, ಸುಲಭ ಅಥವಾ ಕಷ್ಟದ ರೀತಿಗಳು ಇರಬಹುದು. ಬಹಳಷ್ಟು ಸಂಶೋದನೆಯ ನಂತರ, ಮಕ್ಕಳಿಗೂ ಇಂಗ್ಲಿಷ್ ಕಲಿಸಲು ಈ ಒಂದು ಕ್ರಮವನ್ನು ರೂಪಿಸಲಾಗಿದೆ.
೧. ಕನ್ನಡಿದಂದ ಇಂಗ್ಲಿಷ್ ಕಲಿಯುವಿಕೆ.
೨. ಕೇವಲ ಕನ್ನಡ ಓದಲು ಬರುವವರು, ಇಂಗ್ಲಿಷ್-ನ ಒಂದು ಅಕ್ಷರವೂ ತಿಳಿಯದವರು ಕೂಡ ಕಲಿಯಬಹುದು.
೩. ಮೊದಲನೇ ದಿನದಿಂದಲೇ ಇಂಗ್ಲಿಷ್ ಮಾತನಾಡುವುದನ್ನು ಕಲಿಸಲಾಗುವುದು.
೪. ಇದೊಂದು ಬಹಳ ಸರಳವಾದ, ಸಣ್ಣ ಉಚಿತ ಆನ್ಲೈನ್ ಕೋರ್ಸ್.
೫. ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಕಲಿಯುವ ರೀತಿಯಲ್ಲಿ ಈ ಕೋರ್ಸ್-ಅನ್ನು ರೂಪಿಸಲಾಗಿದೆ.
೬. ಮೊದಲು ಮಾತಾಡುವುದನ್ನು ಕಲಿಸಲಾಗುತ್ತದೆ, ನಂತರ ಓದಿ ಬರೆಯಲು ಕಲಿಸಲಾಗುತ್ತದೆ.
೭. ಪ್ರತಿಯೊಂದು ಅಧ್ಯಾಯವು ಸುಲಭವಾಗಿದ್ದು, ಅದನ್ನು ಓದಿ ಅಭ್ಯಾಸ ಮಾಡಿದರೆ ಅದರಲ್ಲಿರುವುದನ್ನೆಲ್ಲ ತಿಳಿಯಬಹುದು.
೮. ಬಹಳಷ್ಟು ಸಲಹೆಗಳು ಹಾಗು ತಂತ್ರಗಳು ಇಂಗ್ಲಿಷ್ ಕಲಿಯಲು ಸಹಾಯ ಮಾಡುತ್ತದೆ.
೯. ಇಂಗ್ಲಿಷ್ ಮಾತನಾಡಲು ಹೆದರಿಕೆ, ಇಂಗ್ಲಿಷ್ ಮಾತನಾಡಲು ಕಷ್ಟವಾಗುವುದು, ಹಿಂಜರಿಕೆ ಇವೆಲ್ಲವನ್ನು ಸುಲಭವಾಗಿ ಪರಿಹರಿಸಲಾಗುವುದು.
ಭಾಷೆಯನ್ನು ಕಲಿತು ಮಾತನಾಡಲು ಕೇವಲ ಕೆಲವು ಪದಗಳ ಅವಶ್ಯಕತೆ ಇದೆ. ಇನ್ನು ಮಿಕ್ಕ ಪದಗಳನೆಲ್ಲ ಅವಶ್ಯಕತೆಗೆ ತಕ್ಕಂತೆ ಕಲಿಯಬಹುದು.
ಒಂದು ಭಾಷೆ ಇಂದ ಇನ್ನೊಂದು ಭಾಷೆ ಕಲಿಯಲು ಒಂದೇ ರೀತಿಯ ಪದಗಳನ್ನು ಅರಿತು ಮಾತನಾಡುವುದು ಮುಖ್ಯವಾಗುತ್ತದೆ. ಬೆಲೆ ಪುಸ್ತಕದ್ದಲ್ಲ, ಬದಲಾಗಿ ಪುಸ್ತಕದಲ್ಲಿ ಕೂಡಿರುವ ವಿಷಯ. ಕಲಿಯಲು ಸರಿಯಾದ ಸಮಯದ ಅವಶ್ಯಕತೆ ಇಲ್ಲ.
ಕಲಿಯುವ ಉತ್ಸಾಹ ಮತ್ತು ಆಸಕ್ತಿ ಇದ್ದಾರೆ ಸಾಕು. ಇಂಗ್ಲಿಷ್ ಬರುವವರ ಜೊತೆಗೆ ದಯವಿಟ್ಟು ಇಂಗ್ಲಿಷ್-ನಲ್ಲೆ ಮಾತನಾಡಿ. ಅವಶ್ಯಕತೆ ಇದ್ದಲ್ಲಿ ಇಂಗ್ಲಿಷ್ ಮಾತನಾಡಿ. ಈ ಭಾಷೆಯನ್ನು ಇತರ ಭಾಷೆಯಂತೆ ಪರಿಗಣಿಸಿ ಕಲೆತು, ನಿಮ್ಮ ತಾಯಿ ಭಾಷೆಗೆ ಹೆಮ್ಮೆ ಪಡಿಸಿ.
ಜೈ ಹಿಂದ್.
Previous Next